ಮಾತನಾಡಿದ ‘ಶಿವಲಿಂಗ’
Posted date: 17 Thu, Sep 2015 – 05:36:22 PM

ಕೆ ಎ ಸುರೇಶ್ ಆರ್ಟ್ಸ್ ಅಡಿಯಲ್ಲಿ ನಿರ್ಮಾಪಕ ಕೆ ಎ ಸುರೇಶ್ ಅವರ ಐದನೇ ಚಿತ್ರ ಶಿವಲಿಂಗ ದಕ್ಷಿಣ ಭಾರತದ ಖ್ಯಾತ ನಿರ್ದೇಶಕ ಪಿ ವಾಸು ಅವರ ನಿರ್ದೇಶನದಲ್ಲಿ ಮೂಡಿ ಬರುತ್ತಿದೆ. ಸೆಂಚುರಿ ಸ್ಟಾರ್ ಡಾ ಶಿವರಾಜಕುಮಾರ್ ಅಭಿನಯದ ಈ ಚಿತ್ರ ಈಗ ಕರಿ ಸುಬ್ಬು ಅವರ ಬಾಲಾಜಿ ಡಿಜಿಟಲ್ ಸ್ಟುಡಿಯೋದಲ್ಲಿ ಮಾತುಗಳ ಜೋಡಣೆ ಪೂರೈಸಿಕೊಂಡಿದೆ.
‘ಎರಡನೇ ಮದುವೆ, ‘ಗೋವಿಂದಾಯ ನಮಹ, ‘ಶ್ರಾವಣಿ ಸುಬ್ರಮಣ್ಯ ಹಾಗೂ ‘ಆರ್ ಎಕ್ಸ್ ಸೂರಿ ಸಿನಿಮಾಗಳ ಯಶಸ್ವೀ ನಿರ್ಮಾಪಕ ಕೆ ಎ ಸುರೇಶ್ ‘ಶಿವಲಿಂಗ’ ಸಿನಿಮವನ್ನು ದೊಡ್ಡ ಮಟ್ಟದಲ್ಲಿ ತೆರೆಯ ಮೇಲೆ ತರಲು ಸಿದ್ಧತೆ ಮಾಡಿಕೊಂಡಿದ್ದಾರೆ. ಪಿ ವಾಸು ಈ ಚಿತ್ರಕ್ಕೆ ಥ್ರಿಲ್ಲರ್ ಕಥಾ ವಸ್ತುವನ್ನು ಆಯ್ಕೆ ಮಾಡಿಕೊಂಡಿದ್ದಾರೆ. ಹೆಸರಾಂತ ನಟಿ ಊರ್ವಶಿಯನ್ನು ಶಿವರಾಜಕುಮಾರ್ ತಾಯಿಯ ಪಾತ್ರಕ್ಕೆ ಕರೆತಂದಿದ್ದಾರೆ. ವೇದಿಕ ಚಿತ್ರದ ಕಥಾ ನಾಯಕಿ.
 
ವಿ ಹರಿಕೃಷ್ಣ ಅವರ ಸಂಗೀತ, ಡಾಕ್ಟರ್ ವಿ ನಾಗೇಂದ್ರ ಪ್ರಸಾದ್ ಅವರ ಸಂಭಾಷಣೆ, ಪಿಕೆಎಚ್ ದಾಸ್ ಅವರ ಛಾಯಾಗ್ರಹಣ, ರವಿ ವರ್ಮ ಅವರ ಸಾಹಸ, ರವಿ ಸಂತೆಹಕ್ಲು ಕಲಾ ನಿರ್ದೇಶನ ಈ ಚಿತ್ರಕ್ಕಿದೆ.
 

Kannada Cinema's Latest Wallpapers
Kannada Cinema's Latest Videos
Error, Select (_footer_contact_) query failed